ವಿಜಯೀಭವ ಯೂಟ್ಯೂಬ್ ಚಾನಲ್ ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಒಂದು ಕಾರ್ಯಕ್ರಮವಾಗಿದೆ.ಯುವ ಸಬಲೀಕರಣದಿಂದ ಬಲಿಷ್ಟ ರಾಷ್ಟ್ರದ ನಿರ್ಮಾಣ ಎಂಬುದು ಇದರ ಧ್ಯೇಯ. ಇಲ್ಲಿ ಶೈಕ್ಷಣಿಕ ಮತ್ತು ಉದ್ಯೋಗದ ಮಾರ್ಗದರ್ಶನ ಹಾಗೂ ಮೋಟಿವೇಷನಲ್ ವಿಡಿಯೋಗಳನ್ನು ನೀಡುವ ಪ್ರಯತ್ನ ಮಾಡಲಾಗುತ್ತಿದ್ದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಚಾನೆಲ್ ನ ವಿಡಿಯೋಗಳು ತುಂಬಾ ಅನುಕೂಲಕರ.
ಕಾಲೇಜು ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳಿಗಾಗಿ ಪಠ್ಯಕ್ರಮ ಆಧಾರಿತವಾದ ಇ-ವಿಷಯವನ್ನು ಅಭಿವೃದ್ಧಿ ಮಾಡುತ್ತಿದೆ.ಎಲ್ಲ ವಿಧ್ಯಾರ್ಥಿಗಳು ಉತ್ತಮ ಗುಣಮಟ್ಟದ ವಿಡಿಯೋಗಳ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ವಿದ್ಯಾರ್ಥಿಗಳು ಈ ಚಾನಲ್ ಗೆ ಭೇಟಿ ನೀಡಿ ತಮ್ಮ ಸೆಮಿಸ್ಟರ್ ಗಳ ಪಠ್ಯಕ್ರಮಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿ ಕಲಿಕೆ ಮಾಡಬಹುದು. ಸುಮಾರು 2000ಕ್ಕೂ ಅಧಿಕ ವಿಡಿಯೋಗಳನ್ನು ಜ್ಞಾನ ನಿಧಿ ಚಾನೆಲ್ ಒಳಗೊಂಡಿದೆ.