GFGC- LIBRARY

TALAKADU

ಗ್ರಂಥಾಲಯವು ಕಾಲೇಜಿನ ಪ್ರಮುಖ ಜ್ಞಾನ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದು. ವಿದ್ಯಾರ್ಥಿಗಳ ಮತ್ತು ಅಧ್ಯಾಪಕರ ಮಾಹಿತಿ ಅಗತ್ಯತೆಯನ್ನು ಪೂರೈಸುವುದರಲ್ಲಿ ನಿರತವಾಗಿದೆ. 2014-15ನೇ ಸಾಲಿನಲ್ಲಿ ಕಾಲೇಜಿನ ಆರಂಭದೊಂದಿಗೆ ಪ್ರಾರಂಭವಾದ ಗ್ರಂಥಾಲಯವು ಹಂತ ಹಂತವಾಗಿ ಬೆಳೆಯುತ್ತಿದ್ದೆ. ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳನ್ನು ಒಳಗೊಂಡಿರುವ ನಮ್ಮ ಕಾಲೇಜಿನಲ್ಲಿ ಮಹಿಳಾ ವಿದ್ಯಾರ್ಥಿಗಳು ಅಧಿಕವಾಗಿದ್ದು ಅವರ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ಗ್ರಂಥಾಲಯ ಕಾರ್ಯನಿರ್ವಹಿಸುತ್ತಿದೆ.

ಪ್ರಸ್ತುತ ಗ್ರಂಥಾಲಯ 3000ಕ್ಕೂ ಮಿಕ್ಕ ಪುಸ್ತಕಗಳನ್ನು ಹೊಂದಿದ್ದು ವರ್ಷ ವರ್ಷ ಪುಸ್ತಕಗಳ ಸಂಖ್ಯೆ ಏರುತ್ತಿದೆ, ಪುಸ್ತಕಗಳಲ್ಲದೇ ಅನೇಕ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಗ್ರಂಥಾಲಯ ಒಳಗೊಂಡಿದ್ದು ಕನ್ನಡದ ಮತ್ತು ಆಂಗ್ಲ ಭಾಷೆಯ ಪ್ರಮುಖ ದಿನಪತ್ರಿಕೆಗಳನ್ನು ತರಿಸಲಾಗುತ್ತಿದ್ದು ಪುಸ್ತಕಗಳನ್ನು ಎರವಲು ಪಡೆಯಲು, ನಿಯತಕಾಲಿಕೆಗಳನ್ನು ಪರಾಮರ್ಶಿಸಲು ಮತ್ತು ದಿನ ಪತ್ರಿಕೆಗಳನ್ನು ಓದಲು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಸ್ತುತ ಪ್ರತಿದಿನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಲೆಕ್ಟ್ರಾನಿಕ್ ಅಥವಾ ಇ-ಮಾಹಿತಿಯನ್ನು ಹೆಚ್ಚು ಹೆಚ್ಚು ಒಳಗೊಳ್ಳುವಂತೆ ಗ್ರಂಥಾಲಯವನ್ನು ರೂಪಿಸಲಾಗುವುದು. ಜೊತೆಗೆ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಅನ್ಲೈನ್ ಮಾಹಿತಿಯನ್ನು ಮತ್ತು ಅಂತರ್ಜಾಲ ತಾಣವನ್ನು ಬಳಸಲು ಅವಕಾಶ ಕಲ್ಪಸಲಾಗುವುದು. ಗ್ರಂಥಾಲಯವನ್ನು ಕಾಲೇಜಿನ ಮಾಹಿತಿ ಮತ್ತು ಕಲಿಕಾ ಕೇಂದ್ರವಾಗಿ (Information & Learning Centre) ಅಭಿವೃದ್ದಿ ಪಡಿಸಲಾಗುವುದು.

ತಲಕಾಡು ಒಂದು ಪ್ರಮುಖ ಐತಿಹಾಸಿಕವಾಗಿ ಮಹತ್ವದ ಪ್ರದೇಶವಾಗಿದ್ದು ಸುಮಾರು 2000 ವರ್ಷಗಳ ಹಿಂದೆ ಗಂಗರ ದಕ್ಷಿಣದ ರಾಜಧಾನಿಯಾಗಿತ್ತು. ನಂತರ ಹೊಯ್ಸಳ ರಾಜಮನೆತನ ಮತ್ತು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟಿತ್ತು. ತಲಕಾಡಿನಲ್ಲಿ ಅನೇಕ ಉತ್ಖನನಗಳನ್ನು ನಡೆಸಲಾಗಿದ್ದು ಅನೇಕ ಗಂಗರ ಮತ್ತು ಹೊಯ್ಸಳರ ಕಾಲದಲ್ಲಿ ನಿರ್ಮಿಸಿದ ದೇವಸ್ಥಾನಗಳನ್ನು ಪತ್ತೆ ಹಚ್ಚಲಾಗಿದ್ದು, ತಲಕಾಡಿನ ಇತಿಹಾಸದ ಬಗ್ಗೆ ಅನೇಕ ಮಹತ್ವದ ದಾಖಲೆಗಳು ಪ್ರಕಟಣೆಯಾಗಿವೆ. ಮುಂದಿನ ದಿನಗಳಲ್ಲಿ ಇವುಗಳನ್ನು ಸಂಗ್ರಹಿಸಿ ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು.