Library Services

ಗ್ರಂಥಾಲಯ ಸೇವೆಗಳು (Library Services)

  • ಪುಸ್ತಕ ಎರವಲು ಸೇವೆ (Circulations)

ಪುಸ್ತಕ ಎರವಲು ಸೇವೆ ಗ್ರಂಥಾಲಯದ ಪ್ರಮುಖ ಕಾರ್ಯವಾಗಿದ್ದು. ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಅಧ್ಯಯನಕ್ಕೆ ಗ್ರಂಥಾಲಯದಿಂದ ಪುಸ್ತಕಗಳನ್ನು ಎರವಲು ನೀಡಲಾಗುವುದು. ಪ್ರಸ್ತುತ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಎರಡು ಪುಸ್ತಕಗಳನ್ನು ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನಾಲ್ಕು ಪುಸ್ತಕಗಳನ್ನು ಮತ್ತು ತೀರ ಅನಿವಾರ್ಯ ಸಂದರ್ಭಗಳಲ್ಲಿ ಐದು ಪುಸ್ತಕಗಳನ್ನು ಹದಿನೈದು ದಿನಗಳ ಅವಧಿಗೆ ಎರವಲು ನೀಡಲಾಗುವುದು. ಅಧ್ಯಾಪಕರಿಗೆ ಐದು ಪುಸ್ತಕಗಳನ್ನು ಒಂದು ಸೆಮಿಸ್ಟರ್‍ಗೆ ಎರವಲು ನೀಡಲಾಗುವುದು.

  • ಪರಾಮರ್ಶನ ಸೇವೆ (Reference/Referral Service)

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ವಿಶೇಷ ಸಂದರ್ಭಗಳಲ್ಲಿ ಅವರ ಮಾಹಿತಿ ಅವಶ್ಯಕತೆಯ ಮೇಲೆ ಪರಾಮರ್ಶನ ಸೇವೆಯನ್ನು ನೀಡಲಾಗುವುದು. ಸಂಶೋಧನೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಅವರ ಮಾಹಿತಿ ಅಗತ್ಯತೆ ಮೇರೆಗೆ ಈ ಸೇವೆ ಲಭ್ಯ.

  • ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್ ಸೇವೆ (SC/ST Book Bank Facility)

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಬುಕ್ ಬ್ಯಾಂಕ್ ವ್ಯವಸ್ಥೆ ಇದ್ದು. ಬುಕ್ ಬ್ಯಾಂಕ್ ಸೇವೆಯಡಿಯಲ್ಲಿ ಅವರಿಗೆ ಹೆಚ್ಚುವರಿ ಪುಸ್ತಕಗಳನ್ನು ಪ್ರತಿ ಸೆಮೆಸ್ಟರ್ ಸಂದರ್ಭದಲ್ಲಿ ಎರವಲು ನೀಡಲಾಗುವುದು. ಈ ವ್ಯವಸ್ಥೆ ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತ.

  • ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳು (Magazines and Journal Section)

ಗ್ರಂಥಾಲಯ ವಿದ್ಯಾರ್ಥಿಗಳಲ್ಲಿ ಮತ್ತು ಅಧ್ಯಾಪಕರಲ್ಲಿ ಪ್ರಚಲಿತ ಮಾಹಿತಿಯ ಮತ್ತು ಸಂಶೋಧನೆಯ ಬಗ್ಗೆ ಅರಿವು ಮೂಡಿಸುವ ಸಂಬಂಧ ಅನೇಕ ವೃತ್ತ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಗ್ರಂಥಾಲಯಕ್ಕೆ ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ತರಗತಿಯ ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿ ವೃತ್ತಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಓದಲು ಅವಕಾಶ ಕಲ್ಪಿಸಲಾಗಿದೆ.

  • ಅನ್ಲೈನ್ ಮಾಹಿತಿ ಸೇವೆಗಳು (Online Access to E-Resources)

ಗ್ರಂಥಾಲಯದಲ್ಲಿ ಓದುಗರಿಗೆ ಅನ್ಲೈನ್ ಮಾಹಿತಿ ಸೇವೆಯನ್ನು ಮಾಡಲಾಗಿದೆ. ಗ್ರಂಥಾಲಯದಲ್ಲಿರುವ ಮಾಹಿತಿ ಪರಿಕರಗಳ ಮೂಲಕ ಲಭ್ಯವಾಗದ ಮಾಹಿತಿಗಳನ್ನು ಅನ್ಲೈನ್ ಅಥವಾ ಇಂಟರ್ನೆಟ್ ವ್ಯವಸ್ಥೆಯಿಂದ ಒದಗಿಸಲಾಗುವುದು. ಮುಂದಿನ ದಿನಗಳಲ್ಲಿ ಗ್ರಂಥಾಲಯ ಎನ್-ಲಿಸ್ಟ್ (N-LIST) ಅನ್ಲೈನ್ ಮಾಹಿತಿ ದತ್ತಾಂಶಕ್ಕೆ ಚಂದಾದಾರಾಗುವುದರ ಮೂಲಕ ಹೆಚ್ಚಿನ ಇ-ಕಂಟೆಂಟ್ ಮಾಹಿತಿಯನ್ನು ಗ್ರಂಥಾಲಯದ ಮೂಲಕ ಒದಗಿಸಲಾಗುವುದು.

  • ರಿಪ್ರೊಗ್ರಾಫಿಕ್ ಸೇವೆಗಳು (Reprographic (Photocopy) Services)

ತೀರ ಅಗತ್ಯ ಸಂದರ್ಭಗಳಲ್ಲಿ ವಿದ್ಯಾರ್ಥಿಗಳಿಗೆ ಪೋಟೋಕಾಫಿ ಅಥವಾ ಜೆರಾಕ್ಸ್ ಸೇವೆಯನ್ನು ಒದಗಿಸಲಾಗುವುದು.

  • ಹಿಂದಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಬಳಕೆ (Question Bank Facility)

ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಪರಾಮರ್ಶಿಸಲು ವಿದ್ಯಾರ್ಥಿಗಳಿಗೆ ವ್ಯವಸ್ಥೆ ಮಾಡಲಾಗಿದ್ದು, ಗ್ರಂಥಾಲಯದ ವೆಬ್ ತಾಣದ ಮೂಲಕ ವಿದ್ಯಾರ್ಥಿಗಳು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಪರಾಮರ್ಶಿಸಬಹುದು.

  • ಸಂಶೋಧನೆ ಮತ್ತು ಪ್ರಕಟಣೆಗೆ ಬೆಂಬಲ (Research & Publication Support)

ಕಾಲೇಜಿನ ಅಧ್ಯಾಪಕರು ಸಂಶೋಧನೆಯಲ್ಲಿ ತೊಡಗಲು ಮತ್ತು ಪ್ರಬಂಧಗಳ ಪ್ರಕಟಣೆಗೆ ಗ್ರಂಥಾಲಯ ಎಲ್ಲಾ ರೀತಿಯ ಬೆಂಬಲ ಮತ್ತು ಸೇವೆಯನ್ನು ನೀಡುವುದು. ಸಂಶೋಧನಾ ಲೇಖನಗಳ ಪ್ರಕಟಣೆಗೆ ಬೇಕಾದ ವ್ಯವಸ್ಥೆಯನ್ನು ಉದಾಹರಣೆಗೆ ಸೂಕ್ತ ನಿಯತಕಾಲಿಕೆ ಆಯ್ಕೆಯ ಸಲಹೆಗಳನ್ನು ನೀಡಲಾಗುವುದು. ಇದಲ್ಲದೇ ಕಾಲೇಜಿನ ಅಧ್ಯಾಪಕರ ಪ್ರಕಟಣೆಗಳನ್ನು ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು.

  • ಮಾಹಿತಿ ಸಾಕ್ಷರತೆ (Information Literacy Programs)

ವಿದ್ಯಾರ್ಥಿಗಳಿಗೆ ಗ್ರಂಥಾಲಯದ ಬಳಕೆ ಬಗ್ಗೆ ಮತ್ತು ಅನ್ಲೈನ್ ಮಾಹಿತಿಯ ಸೂಕ್ತ ಬಳಕೆ ಬಗ್ಗೆ ಮಾಹಿತಿ ಸಾಕ್ಷರತೆಯಡಿಯಲ್ಲಿ ಅರಿವು ಮೂಡಿಸಲಾಗುವುದು. ವರ್ಷದ ಪ್ರಾರಂಭದಲ್ಲಿ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವನ್ನು ನೆಡೆಸಲಾಗುವುದು. ಇದಲ್ಲದೇ ಗ್ರಂಥಾಲಯದ ವೆಬ್ಸೈಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗುವುದು.

  • ಉನ್ನತ ಶಿಕ್ಷಣ ಕ್ಷೇತ್ರದ ಮಾರ್ಗದರ್ಶನ (Counselling for Higher Studies)

ಉನ್ನತ ಶಿಕ್ಷಣ ಮುಂದುವರೆಸುವ ಪದವಿ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಯ ಕ್ಷೇತ್ರಗಳ ಆಧಾರದ ಮೇಲೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿರುವ ಅವಕಾಶಗಳು ಮತ್ತು ಇತರ ಉನ್ನತ ಪದವಿಗಳ ಬಗ್ಗೆ ಅವುಗಳ ಕುರಿತ ಮಾಹಿತಿ ಮತ್ತು ಮಾರ್ಗದರ್ಶನ ಮಾಡಲಾಗುವುದು.