SWAYAM MOOCS

ಸ್ವಯಂ ಮೂಕ್ಸ್ (Swayam MOOCs) ಬಾರತ ಸರ್ಕಾರದ ಒಂದು ವೆಬ್ ಆಧಾರಿತ ಶೈಕ್ಷಣಿಕ ತಾಣವಾಗಿದ್ದು, ಅತ್ಯತ್ತಮ ಭೋಧನಾ ಕಲಿಕಾ ಸಾಮಾಗ್ರಿಗಳು ಸುಲಭವಾಗಿ ಎಲ್ಲಾ ವಿದ್ಯಾರ್ಥಿಗಳಿಗೂ ಅದರಲ್ಲೂ ಅವಕಾಶವಂಚಿತ ವಿದ್ಯಾರ್ಥಿ ಸಮೂಹಗಳು ಜ್ಞಾನಾಧಾರಿತ ಅರ್ಥವ್ಯವಸ್ಥೆಯಲ್ಲಿ ಭಾಗವಹಿಸಲು ಮತ್ತು ತಮ್ಮ ಸ್ವಕಲಿಕೆಯನ್ನು ಮಾಡಲು ರೂಪಿಸಲಾದ ಒಂದು ಕಾರ್ಯಕ್ರಮ. ಈ ಸ್ವಯಂ ಮೂಕ್ಸ್ 9ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ಪಾಠ ಪ್ರವಚನಗಳ ಸರಣಿ ವಿಡಿಯೋಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಈ ತಾಣದಲ್ಲಿ ತಮ್ಮ ಹೆಸರು ನೋಂದಣಿ ಮಾಡುವುದರ ಮೂಲಕ ತಮಗೆ ಆಸಕ್ತಿ ಇರುವ ವಿಷಯವನ್ನು ಅನ್ಲೈನ್ ಮೂಲಕ ಕಲಿಯಲು ಅವಕಾಶವಿದೆ. ಎಡಭಾಗದಲ್ಲಿ ನೀಡಿರುವ ಸ್ವಯಂ ಲೋಗೋ ಅಥವಾ ಚಿಹ್ನೆಯನ್ನು ಕ್ಲಿಕ್ಕಿಸಿದರೆ ಸ್ವಯಂ ವೆಬ್ ತಾಣಕ್ಕೆ ಭೇಟಿ ನೀಡಬಹುದು.

ಇ-ಪಿಜಿ ಪಾಠಶಾಲಾ(e-PG Pathashala) ಕೂಡ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆಯ ಒಂದು ತಂತ್ರಜ್ಞಾನಾಧಾರಿತ ಕಾರ್ಯಕ್ರಮವಾಗಿದ್ದು ಮುಖ್ಯವಾಗಿ ಸ್ನಾತಕೋತ್ತರ ಪದವಿಯ ವಿಷಯಗಳ ಬಹುತೇಕ ಎಲ್ಲಾ ವಿಷಯಗಳ ಪಠ್ಯಗಳನ್ನು ಒಳಗೊಂಡಿದೆ. ಸರಿ ಸುಮಾರು 19000 ವಿಡಿಯೋಗಳು ಸೇರಿದಂತೆ 20000ಕ್ಕೂ ಅಧಿಕ ಪಠ್ಯಗಳು, 30000ಕ್ಕೂ ಹೆಚ್ಚು ಕ್ಚಿಜ್ ಗಳನ್ನು ಒಳಗೊಂಡಿರುವ ಈ ತಾಣ ವಿದ್ಯಾರ್ಥಿಗಳ ಸ್ವಕಲಿಕೆಗೆ ತುಂಬಾ ಸಹಕಾರಿ. ಎಡಭಾಗ ಇ-ಪಿಜಿ ಪಾಠಶಾಲಾ ಚಿತ್ರವನ್ನು ಕ್ಲಿಕ್ ಮಾಡಿದರೆ ಈ ತಾಣಕ್ಕೆ ನೀವು ಭೇಟಿ ನೀಡಬಹುದು.

UGC ಮೂಕ್ಸ್ (UGC MOOCs) ಬಾರತ ಸರ್ಕಾರದ ಒಂದು ವೆಬ್ ಆಧಾರಿತ ಶೈಕ್ಷಣಿಕ ತಾಣವಾಗಿದ್ದು, ಅತ್ಯತ್ತಮ ಭೋಧನಾ ಕಲಿಕಾ ಸ್ವಯಂ ಸಾಮಾಗ್ರಿಗಳನ್ನು ಒಳಗೊಂಡಿದೆ. ಯುಜಿಸಿ ಸ್ವಯಂನ್ನು ಮುಖ್ಯ ಸ್ವಯಂ ವೆಬ್ ತಾಣದೊಂದಿಗೆ ವಿಲೀನ ಮಾಡಲಾಗಿದ್ದು. ಇದರ ಕಂಟೆಂಟ್ ಗಳನ್ನು ಅಲ್ಲಿ ಕೂಡ ನೋಡಬಹುದು. ಎಡಭಾಗದಲ್ಲಿ ನೀಡಿರುವ UGC ಸ್ವಯಂ ಮೂಕ್ಸ್ ಲೋಗೋ ಅಥವಾ ಚಿಹ್ನೆಯನ್ನು ಕ್ಲಿಕ್ಕಿಸಿದರೆ UGC ಮೂಕ್ಸ್ ವೆಬ್ ತಾಣಕ್ಕೆ ಭೇಟಿ ನೀಡಬಹುದು.

ಸ್ವಯಂಪ್ರಭಾ (SwayamPrabha) 32 ಡಿಟಿಹೆಚ್ ಚಾನಲ್‍ಗಳ ಗುಚ್ಚ. ಜಿಸಾಟ್ -15 ಸ್ಯಾಟಲೈಟ್ ಸಹಾಯದಿಂದ ದಿನನಿತ್ಯ 24ಗಂಟೆಗಳ ಕಾಲ ಅತ್ಯತ್ತಮ ಮಟ್ಟದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ತಾಣ ಡಿಟಿಹೆಚ್ ಚಾನಲ್ ನಲ್ಲಿ ಪ್ರಸಾರ ಮಾಡುವ ಶೈಕ್ಷಣಿಕ ವಿಡಿಯೋಗಳನ್ನು ಒಳಗೊಂಡಿದ್ದು ಪದವಿ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಾವಿರಾರು ವಿಡಿಯೋಗಳ ಮೂಲಕ ಕಲಿಯಲು ಅವಕಾಶವಿದೆ. ಈ ತಾಣಕ್ಕೆ ಭೇಟಿ ನೀಡಲು ಎಡಭಾಗದಲ್ಲಿ ನೀಡಿರುವ ಸ್ವಯಂಪ್ರಭಾದ ಚಿತ್ರವನ್ನು ಕ್ಲಿಕ್ಕಿಸಿ.