Library Rules & Regulations

ಗ್ರಂಥಾಲಯದ ನಿಯಮಗಳು

(Library Rules & Regulations)


  • ಗ್ರಂಥಾಲಯ ಕಾರ್ಯನಿರ್ವಹಣೆಯ ವೇಳೆ: ಬೆಳಿಗ್ಗೆ 10.00 ರಿಂದ ಸಾಯಂಕಾಲ 5.00 ಗಂಟೆಯವರೆಗೆ.

  • ಗ್ರಂಥಾಲಯದ ಪುಸ್ತಕಗಳ ಮೇಲೆ ಯಾವುದೇ ರೀತಿಯ ಗುರುತುಗಳನ್ನಾಗಲಿ, ಇನ್ನಿತರ ಯಾವುದೇ ಹಾನಿಯನ್ನು ಮಾಡುವಂತಿಲ್ಲ. ಯಾವುದೇ ಹಾನಿ ಮಾಡಿರುವುದು ಕಂಡುಬಂದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.

  • ಪ್ರತಿ ವಿದ್ಯಾರ್ಥಿಗೆ 2 ಪುಸ್ತಕಗಳನ್ನು 15 ದಿನಗಳ ಅವಧಿಗೆ ಎರವಲು ಪಡೆಯಲು ಅವಕಾಶವಿರುತ್ತದೆ. 15 ದಿನಗಳ ನಂತರ ಹಿಂತಿರುಗಿಸುವ ಪುಸ್ತಕಗಳ ಮೇಲೆ ದಿನ ಒಂದಕ್ಕೆ 1 ರೂಪಾಯಿ ದಂಡವನ್ನು ವಿಧಿಸಲಾಗುವುದು.

  • ಪುಸ್ತಕಗಳನ್ನು, ನಿಯತಕಾಲಿಕೆಗಳು ಮತ್ತು ಇನ್ನಿತರ ಗ್ರಂಥಾಲಯ ಪರಿಕರ ಎರವಲು ಪಡೆಯಲು ಗ್ರಂಥಾಲಯ ಸದಸ್ಯತ್ವ ಕಾರ್ಡ್‍ನ್ನು ತೆಗೆದುಕೊಂಡು ಬರುವುದು ಕಡ್ಡಾಯ.

  • ಗ್ರಂಥಾಲಯ ಸದಸ್ಯತ್ವ ಕಾರ್ಡ್‍ನ್ನು ಯಾವುದೇ ಕಾರಣಕ್ಕೂ ವರ್ಗಾಹಿಸುವಂತಿಲ್ಲ.

  • ಗ್ರಂಥಾಲಯ ಸದಸ್ಯತ್ವ ಕಾರ್ಡ್‍ನ್ನು ಕಳೆದುಕೊಂಡಲ್ಲಿ ತಕ್ಷಣ ಗ್ರಂಥಪಾಲಕರ ಗಮನಕ್ಕೆ ತರುವುದು. ನಕಲು ಗ್ರಂಥಾಲಯ ಸದಸ್ಯತ್ವ ಕಾರ್ಡ್‍ನ್ನು ಪಡೆಯಲು ಹೆಚ್ಚುವರಿ 20 ರೂಪಾಯಿಯನ್ನು ಪಾವತಿಸಿ ನಕಲು ಸದಸ್ಯತ್ವ ಕಾರ್ಡ್‍ನ್ನು ಪಡೆಯಬಹುದು. ಗ್ರಂಥಪಾಲಕರು ಪುಸ್ತಕಗಳನ್ನು ಎರವಲು ನೀಡುವ/ನೀಡದಿರುವ ಸಂಪೂರ್ಣ ಅಧಿಕಾರವನ್ನು ಹೊಂದಿರುತ್ತಾರೆ.

  • ವಿದ್ಯಾರ್ಥಿಗಳು ತಮ್ಮ ಅಂತಿಮ ವರ್ಷದ ಕೊನೆಯಲ್ಲಿ/ಅನಿವಾರ್ಯ ಕಾರಣಗಳಿಂದ ಮಧ್ಯದಲ್ಲಿ ಕಾಲೇಜು ಬಿಟ್ಟಲ್ಲಿ ಕಡ್ಡಾಯವಾಗಿ ಗ್ರಂಥಾಲಯದ ಸದಸ್ಯತ್ವ ಕಾರ್ಡನ್ನು ಹಿಂತಿರುಗಿಸಿ ಗ್ರಂಥಾಲಯದಿಂದ ಬೇ-ಬಾಕಿ ಪ್ರಮಾಣ ಪತ್ರವನ್ನು (No-Due Certificate) ಪಡೆಯತಕ್ಕದ್ದು.